ನುಡಿದರೆ ಮುತ್ತಿನ ಹಾರದಂತಿರಬೇಕು!
ನುಡಿದರೆ ಮಾಣಿಕ್ಯದ ದೀಪ್ತಿಯಂತಿರಬೇಕು!
ನುಡಿದರೆ ಸ್ಫಟಿಕದ ಶಲಾಕೆಯಂತಿರಬೇಕು!
ನುಡಿದರೆ ಲಿಂಗ ಮೆಚ್ಚಿ ಅಹುದೆನಬೇಕು!
ನುಡಿಯೊಳಗಾಗಿ ನಡೆಯದಿದ್ದರೆಕೂಡಲಸಂಗಮದೇವನೆಂತೊಲಿವನಯ್ಯ ?
Transliteration:
nuDidare muttina hAradaMtirabEku!
nuDidare mANikyada dIptiyaMtirabEku!
nuDidare sPaTikada SalAkeyaMtirabEku!
nuDidare liMga mecci ahudenabEku ?
nuDiyoLagAgi naDeyadiddare
kUDalasaMgamadEvaneMtolivanayya ?
Translation:
If you should speak, your words should be like pearls strung on a thread!
If you should speak, your words should be like the luster shed by a ruby!
If you should speak, your words should be like a crystal's flash that cleaves the blue!
If you should speak, the Lord must say "yes, yes, that is true"!
But, if your deeds do not reflect your words, how can Lord Kudala Sangama accept you?
Nanna Anisike :
ಈ ವಚನದ ಪ್ರತಿಯೊಂದು ಸಾಲಿಗೂ ಮತ್ತು ಕೊನೆಯ ಸಾಲಿಗೂ ಸಂಬಂಧವಿದೆ ಎನಿಸುತ್ತದೆ. ಇಲ್ಲದಿದ್ದರೆ ಮೊದಲ ಸಾಲಿನ ಅರ್ಥ- “ನಾವು ಮಾತಾಡಿದ್ದೆಲ್ಲವು ಮುತ್ತಿನಂತೆ ಸುಂದರವಾಗಿರಬೇಕು, ಮತ್ತು ನಮ್ಮ ಮಾತುಗಳು ಒಂದಕ್ಕೊಂದು ಸಂಬಂಧವಿರದ ಬಿಡಿ ಮುತ್ತುಗಳಂತಿರದೆ ಒಂದು ವಿಷಯಕ್ಕೆ ಸಂಬಂಧಿತವಾಗಿ ಮುತ್ತಿನಹಾರದಂತಿರಬೇಕು” ಎಂದಾಗುತ್ತದೆ. ಒಂದು ವಿಷಯಕ್ಕೆ ಸಂಬಂಧಿಸಿದಂತೆ ಕೆಲವು ಸುಂದರ ಮಾತುಗಳನ್ನಾಡಿದರೆ ಅಲ್ಲಿ ಯಾವ ಸೌಂದರ್ಯವಿದ್ದೀತು? ಯಾರೋ ಹೇಳಿದ ಒಳ್ಳೆಯ ಮಾತುಗಳನ್ನು ಬಾಯಿಪಾಠಮಾಡಿ ಹೇಳಿದರೆ ಅದು ಸುಂದರವಾಗದು. ನಮ್ಮ ನುಡಿಯನ್ನು ನಮ್ಮ ನಡೆಯಲ್ಲಿ ಪೋಣಿಸಿದರೆ ಮಾತ್ರ ಅದು ಸುಂದರವಾಗಬಲ್ಲುದು. ನಮ್ಮ ನುಡಿಯನ್ನು ನಡೆಯಲ್ಲಿ ಪೋಣಿಸಿದಂತಹ ಆಚರಣೆ ಗಟ್ಟಿ ಗೊಂಡಾಗ ಸುತ್ತಲಿದ್ದವರ ಮೇಲೆ ಅದರ ಪ್ರಭಾವ (ಕಾಂತಿ, ದೀಪ್ತಿ ಬೀರುತ್ತದೆ) ಉಂಟಾಗುತ್ತದೆ. ನುಡಿದರೆ ಮಾಣಿಕ್ಯದ ದೀಪ್ತಿಯಂತಿರಬೇಕು ಎಂದರೆ ನಮ್ಮ ನುಡಿ ಮತ್ತು ಆಚರಣೆ ಒಂದುಗೂಡಿ ಗಟ್ಟಿಗೊಂಡು ಇತರರ ಮೇಲೆ ಪರಿಣಾಮವನ್ನುಂಟು ಮಾಡಬೇಕು. ಇಂತಹ ಆಚರಣೆ ಇನ್ನೂ ಗಟ್ಟಿಗೊಂಡು ಸ್ಫಟಿಕದ ಶಲಾಕೆಯಂತಾಗಬೇಕು. ಅಂದರೆ ನಮ್ಮ ನುಡಿ ಮತ್ತು ನಡೆ ನೇರ, ಪಾರದರ್ಶಕ ಮತ್ತು ಸ್ಪಷ್ಟವಾಗಿರಬೇಕು. ಅವುಗಳಲ್ಲಿ ಯಾವುದೇ ರೀತಿಯ ಕಾಪಟ್ಯವಿರಬಾರದು. ಅಂದರೆ ವ್ಯಕ್ತಿಯ ಒಳ ಹೊರಗುಗಳು ಒಂದಾಗಬೇಕು. ಇದಾದ ನಂತರ ಬಸವಣ್ಣನವರು “ನುಡಿದರೆ ಲಿಂಗವು ಮೆಚ್ಚಿ ಅಹುದಹುದೆನ್ನಬೇಕು” ಎಂದು ಹೇಳುತ್ತಾರೆ. ಇದು ಅತ್ಯಂತ ಮಹತ್ವಪೂರ್ಣವಾದ ಮಾತು. ಲಿಂಗವೆಂದರೆ ಏನೆಂದು ಅರ್ಥಮಾಡಿಕೊಂಡು ಹೇಳುವುದು ನನ್ನಳವಲ್ಲ, ಆದರೆ ಅದರ ಅರ್ಥ ನನಗೆ ತಿಳಿದಂತೆ ನಾನು ವಿವರಿಸುತ್ತೇನೆ. ಲಿಂಗವೆಂದರೆ ದೇವರೆಂದು ಹೇಳುತ್ತೇವೆ. ಆದರೆ ಕಾಣದ ದೇವರನನ್ನನು ಮೆಚ್ಚಿಸುವುದು ಹೇಗೆ? ಎಂಬ ಪ್ರಶ್ನೆ ಹುಟ್ಟುತ್ತದೆ. ಎಲ್ಲದರಲ್ಲಿಯೂ ದೇವರನ್ನು ಕಾಣಬೇಕು ಎಂದು ಹೇಳುತ್ತಾರೆ. ಆತನು ಅಣುರೇಣುತೃಣಕಾಷ್ಠಗಳಲ್ಲಿಯೂ ಇದ್ದಾನೆ ಎನ್ನುತ್ತಾರೆ ಅನುಭಾವಿಗಳು.( ತನ್ನ ತಾ ಅರಿಯುವ ಮಾರ್ಗದಲ್ಲಿ ಹೋಗುವವನು ಈ ಮಾತಿನಲ್ಲಿ ಶ್ರದ್ಧೆಯನ್ನಿಡಬೇಕು. ಅದನ್ನು ಅರಿಯುವ ಸತತ ಪ್ರಯತ್ನ ಮಾಡಬೇಕು.) ಎಂದರೆ ಅಣುರೇಣುತೃಣಕಾಷ್ಠಗಳನ್ನು ಮೆಚ್ಚಿಸಬೇಕೆಂದಾಯಿತು ಅಲ್ಲವೇ? ಹಾಗಾದರೆ ಈ ಜಗತ್ತಿನಲ್ಲಿರುವ ಸಕಲ ಜಡ ಚೇತನಗಳು ಒಪ್ಪುವಂತಹ ನಡೆ ನುಡಿ ನಮ್ಮದಾಗಿರಬೇಕಲ್ಲವೇ? ಅಂದರೆ ಯಾವ ದೇಶದವರಿಗೇ ಆಗಲಿ, ಯಾವ ಜನಂಗದವರಿಗೇ ಆಗಲಿ, ಯಾವ ಲಿಂಗದವರಿಗೇ ಆಗಲಿ, ಯಾವ ಜನಾಂಗದವರಿಗೇ ಆಗಲಿ, ಯಾವ ಜಾತಿಯವರಿಗೇ ಆಗಲಿ, ಯಾವ ಜಡವಸ್ತುವಿಗೇ ಆಗಲಿ ಹಾನಿಯಾಗದಂತೆ ನಮ್ಮ ನಡೆ ನುಡಿಯಿರಬೇಕು. ಇದು ವಿಶ್ವದ ಜಡ ಚೇತನಗಳ ಬಗ್ಗೆ ಆಳವಾದ ಪ್ರೀತಿಯಿದ್ದಾಗ ಮಾತ್ರ ಸಾಧ್ಯವಾಗುತ್ತದೆ. ಆದರೆ ಈ ಆಳವಾದ ಪ್ರೀತಿ ಹುಟ್ಟುವುದು ಹೇಗೆ? ನನಗನ್ನಿಸುವ ಮಟ್ಟಿಗೆ ಈ ಪ್ರೀತಿ ಎಲ್ಲರಲ್ಲಿಯೂ ಇದ್ದೇ ಇರುತ್ತದೆ. ಅನೇಕಸಲ ನಮಗರಿವಿಲ್ಲದೆ ಅದು ನಮ್ಮ ಸುತ್ತಲಿನವರ ಮೇಲೆ ಹೊನಲಾಗಿ ಹರಿಯುತ್ತದೆ. ಅದಕ್ಕೆ ಯಾವ ಕಾರಣವೂ ಬೇಕಿಲ್ಲ. ಹಾಗಾದಾಗ ನಾವು ಆನಂದದಲ್ಲಿ ಮುಳುಗುತ್ತೇವೆ. ಅಲ್ಲಿ ಯಾವ ಸ್ವಾರ್ಥವೂ ಇರುವುದಿಲ್ಲ. ಇಂತಹ ಅನುಭವ ಎಲ್ಲರ ಜೀವನದಲ್ಲಿ ಕ್ಷಣದಮಟ್ಟಿಗಾದರೂ ಆಗುತ್ತದೆ. ಆದರೆ ಅದು ಬಹು ಬೇಗ ಅಂದರೆ ನಾವು ಅದನ್ನು ಗುರುತಿಸುವ ಮೊದಲೇ ಮಾಯವಾಗುತ್ತದೆ. ಏಕೆಂದರೆ ನಾವು ಈ ಜಗತ್ತಿನೆ ಆಗು ಹೋಗುಗಳಲ್ಲಿ ಪೂರ್ತಿಯಾಗಿ ಮುಳುಗಿ ಹೋಗುತ್ತೇವೆ, ಅವುಗಳಿಂದ ಪ್ರಭಾವಿತರಾಗುತ್ತೇವೆ. ನಮ್ಮ ನಡತೆಯನ್ನು ಅತ್ಯಂತ ಸೂಕ್ಷ್ಮವಾಗಿ ಗಮನಿಸಿದಾಗ ನಮಗೆ ಇದು ಗೊತ್ತಾಗುತ್ತದೆ. ಈ ಕಾಣ್ಕೆ, ಎಚ್ಚರಿಕೆಯುಳ್ಳವನ ನಡೆ ನುಡಿಯನ್ನು ಮಾತ್ರ ಲಿಂಗ ಮೆಚ್ಚಲು ಸಾಧ್ಯ. ಈ ವಚನದಲ್ಲಿ ನುಡಿ ಮತ್ತು ನಡತೆ ಎಂಬ ಎರಡು ಪದಗಳನ್ನು ಬಳಸಿದರೂ ಸಹ ಅವೆರಡೂ ಒಂದೇ ಆಗಬೇಕೆಂಬುದು ಬಸವಣ್ನನವರ ಆಶಯ. ಇವೆರಡು ಒಂದಾಗದಿದ್ದರೆ ಕೂಡಲ ಸಂಗಮ ಒಲಿಯುವುದಿಲ್ಲ ವೆಂದು ಅವರು ಹೇಳುತ್ತಾರೆ. ನಮ್ಮ ನಡೆ ನುಡಿ ಒಂದಾಗಬೇಕಾದರೆ ನಾವು ನಮ್ಮ ನಡೆ ನುಡಿಯನ್ನು ನಿರಂತರವಾಗಿ ಗಮನಿಸಬೇಕಾಗುತ್ತದೆ. ಅಂದರೆ ಈ ವಚನವೂ ಕೂಡ ಹಿಂದಿನ ವಚನದಂತೆಯೇ ಸ್ವ-ರೂಪದ ಅರಿವಿನೆಡೆಗೆ ಒಯ್ಯುತ್ತದೆ.
About Me
- shivakumar
- bengaluru, karnataka, India
- Iam more workoholic person.. follower of lord basaveshwar nanudi KAYAKAVE KAILASA
Monday, October 25, 2010
Tuesday, October 12, 2010
Don't be a seperatist
ivanArava ivanArava ivanAravaneMdu enisadirayya.
iva nammava iva nammava, iva nammavaneMdu enisayya.
kUDala saMgamadEvA nimma maneya maganeMdu enisayya.
Meaning:
Don't make (me) think, "Whose is this man ? Whose is this man ? Whose is this man ?"
Make (me) think, "This is our man. This is our man. This is our man."
Oh the Deity of kUDala saMgama, make (me) think that "I am a son of
Your house."
iva nammava iva nammava, iva nammavaneMdu enisayya.
kUDala saMgamadEvA nimma maneya maganeMdu enisayya.
Meaning:
Don't make (me) think, "Whose is this man ? Whose is this man ? Whose is this man ?"
Make (me) think, "This is our man. This is our man. This is our man."
Oh the Deity of kUDala saMgama, make (me) think that "I am a son of
Your house."
Monday, October 11, 2010
basavanna vachanas
- The power of knowledge destroys ignorance;
- The power of light dissipates darkness;
- The power of truth is foe of all untruth;
- The sharana's experience of god is the sole cure of worldliness;
-
- - Lord Kudala Sangamadeva
-
- ಜ್ಞಾನದ ಬಲದಿಂದ ಅಜ್ಞಾನದ ಕೇಡು ನೋಡಯ್ಯ
- ಜ್ಯೋತಿಯ ಬಲದಿಂದ ಅಂಧಕಾರದ ಕೇಡು ನೋಡಯ್ಯ
- ಸತ್ಯದ ಬಲದಿಂದ ಅಸತ್ಯದ ಕೇಡು ನೋಡಯ್ಯ
- ಕೂಡಲ ಸಂಗನ ಶರಣರ ಬಲದಿಂದ ಆತ್ಮನ ಅಹಂಕಾರದ ಕೇಡು ನೋಡಯ್ಯ
-
- -ಕೂಡಲ ಸಂಗಮ ದೇವ......
-
- Don't rob, Don't kill, Never ever lie
- Don't get angry, Don't think negative about others
- Don't self describe, Don't tease others
- This is the way of self respect, this is the way to get respected by the world.
- This is the way of impressing my lord Koodala sangam deva.
- ಕಳಬೇಡ, ಕೊಲಬೇಡ, ಹುಸಿಯ ನುಡಿಯಲುಬೇಡ
- ಮುನಿಯಬೇಡ, ಅನ್ಯರಿಗೆ ಅಸಹ್ಯ ಪಡಬೇಡ
- ತನ್ನ ಬಣ್ಣಿಸಬೇಡ , ಇದಿರು ಹಳೆಯಲುಬೇಡ
- ಇದೆ ಅಂತರಂಗ ಶುದ್ದಿ, ಇದೆ ಬಹಿರಂಗ ಶುದ್ದಿ
- ಇದೆ ನಮ್ಮ ಕೂಡಲ ಸಂಗಮ ದೆವನೊಲಿಸುವ ಪರಿ.
Subscribe to:
Posts (Atom)